Wednesday, February 27, 2013

|| ಶಶಿ ಪ್ರೇಯಸಿ ||


ಬಾನಿನಲಿ ಬೆಳದಿಂಗಳಿಲ್ಲ
ಹಣತೆಯಲಿ ಉರಿದೀಪವಿಲ್ಲ
ಹಾಗಾದರು ನಿನ್ನಂದ ಬೆಳಗುತಿಹುದು
ಕಾರಣವು ಅಡಗಿರುವ ಚಂದಿರನು
ಹಣತೆಯಲಿ ನಂದಾದೀಪವಾಗಿಹನು ||

ನಿನ್ನಂದ ನೋಡಲು ನಿನ್ನೋಂದಿಗೆ ಸಾಗಲು
ಉರಿಯನು ನೀಗಲು ತುಸು ಛಳಿಯನು ನೀಡಲು
ಹಣತೆಯಲಿ ಅಡಗಿಹನು ಚಂದಿರನು
ನನ ಪ್ರೀತಿಗೆ ಸ್ಪೂರ್ತಿಯು ನಿನ್ನಂದವು
ಅದಕೊಡೆಯನಾಗಲು ನಾನು ಬಲುಚಂದವು ||

ಪ್ರತಿ ರಾತ್ರಿ ಕನಸಿನಲಿ ನಿದ್ದೆಯನು ಕೆಡಿಸುತಲಿ
ಮನಸಾರೆ ಬಯಸುತಲಿ ಗಮನವ ಸೆಳೆದಿಹಳು
ಕರಿಮಚ್ಚೆ ಎಡಬದಿಯಲಿ ಕೆಂದುಟಿಯ ಪಕ್ಕದಲಿ
ಮರೆಮಾಚುತ ದ್ರಷ್ಠಿಯನು ಅದೃಷ್ಠವೆ ತುಂಬಿಹುದು
ಮನದೊಡತಿ ಶಶಿ ಪ್ರೇಯಸಿ ನನ್ನವಳಾಗಿರುವಳು ||

Sunday, February 24, 2013

|| ಶೋಧಕ||


ಅತಿ ಬೇಸರದಲಿ ದಿನಗಳನು ಕಳೆದಾಗಿದೆ
ನಿನ್ನನು ಹುಡುಕುವ ಪಾಡು ನನದಾಗಿದೆ
ಎಲ್ಲೆಂದು ನಿನ್ನನು ಅರಸಲಿ ಕರಿಗತ್ತಲಲಿ
ನೀ ನಿಲ್ಲದ ಬಾಳಿನಲಿ ಆವರಿಸಿದೆ ಇರುಳು
ಜನಿಸಿಹೆಯಾ ನನಗೆ ನೀ ಎಂಬ ಸತ್ಯ ಅರಿಯದು ||

Tuesday, February 5, 2013

|| ಅಪರೂಪದಂದ ||

ಬೆಳದಿಂಗಳ ಬೆಳಕಲ್ಲಿ
ಪ್ರಜ್ವಲಿಸೊ ಅಂದವನು
ಆ ಚಂದಿರ ತಾ ನೋಡಲು
ದುಮುಕಿ ಮೇಲೆ ಬಂದನು ||

ಕಣ್ಣಗಲಿಸೊ ರೂಪವನು
ನಾ ದಿಟ್ಟಿಸಿ ನೋಡಿರಲು
ಗಮನ ಸೆಳೆಯೊ ಮಾತುಗಳು
ಮನ ಸೆಳೆಯುತ  ಕೇಳಿಬಂದವು ||

ಹೂವಂತೆ ಅರಳಿರೊ ನಿನ ಮೊಗದಲಿ
ಅಪರೂಪದ ನಿನ್ನಂದವು
ಬಹುರೂಪದ ಆಸೆಗಳಿಗೆ
ಆನಂದದಿ ಜನ್ಮ ನೀಡಿದವು ||