Friday, August 31, 2012

|| ಕಾಲಾಯ ತಸ್ಮೈ ನಮಃ ||

ಹುಟ್ಟಿವ ಜೀವಿಯು ಭುವಿಗೆ ಬಂದಾಗ
ಕಾಣುವನು ತೊಂದರೆ ತೊಡಕುಗಳನ್ನ
ಅನುಭವಿಸುವನು ಸುಖ ದುಖಃಗಳನ್ನ
ಜನುಮದ ಘಳಿಗೆಯು ಚನ್ನಾಗಿರಲು
ಮೆರೆಯುವನೆಂದು ಮಹಾರಾಜನಂತೆ
ಪರಿವರ್ತಿತವಾಗಿ ಕೆಡುಕಾಗಿರಲು
ಜೀವನ ಸವೆಯುಬೇಕು ಹಾವಾಗಿ
ಯಾವ ಸಮಯದಿ ಎನಾಗುವುದೆಂದು
ಹೇಳಲಾಗದು ಯಾರಿಂದಲು
ಬಂದಂತೆ ಬದುಕಲು ಕಲಿತರೆ
ಜೀವನ ಅರಳುವುದು ಹೂವಂತೆ
ಹರಡುವುದು ಘಮಘಮಿಸುವ ಸುವಾಸನೆಯು
ಯಾವ ಘಳಿಗೆಯಲಿ ಎಳುವುವರೊ
ಯಾವ ಕ್ಷಣದಲಿ ಬೀಳುವರೊ
ಸ್ವಂತ ಜೀವಕೆ ತಿಳಿಯದೆ ಹೋದರೂ
ಕಾಲ ನಿರ್ಣಯಿಸುವುದು ತಾತ್ಪರ್ಯವ ||

Tuesday, August 28, 2012

|| ಸತ್ವವಿಲ್ಲದ ಮರಣವು ಮರಳಲು ||

ಭಾವವಿಲ್ಲದ ಗೀತೆಯಲಿ ಭಾವವೆಲ್ಲಿ ಹುಡುಕಲಿ
ಚಂದ್ರನಿಲ್ಲದ ಬಾನಿಲಲ್ಲಿ ಬೆಳದಿಂಗಳ ಹೇಗೆ ಕಾಣಲಿ
ಭರವಸೆಯಲಿ ಈಜದೆ ಹೋದರೆ ಮುಳುಗುವೆ ನೀರಿನಲಿ
ಮರಣಕೆ ಮುಂಗುರುಳು ಮೂಡಿ ಬಂದರೂ
ಅವನ ಚರಣದಡಿಯನು ಸೇರುವರು
ಮರಳಿ ಬರಲು ಜನನಿ ಜಠರವ ತುಂಬುವರು ||

ಸತ್ವವಿಲ್ಲದ ಬದುಕಿನಲ್ಲಿ ತತ್ವವನ್ನು ಹೇಳುತ
ಯಾರ ಮೆರೆಸಲು ನೀನು ಮುಳುಗುವೆ
ಮೂರುದಿನಗಳ ಬಾಳ ಪಯಣದಲಿ
ದುಗುಡ ದೇಹದಲಿ ಕೊರೆವ ಛಳಿಯಲಿ
ಭರವಸೆಯಲಿ ಮೀಸು ನೀ ಹೊಳೆಯ ಸುಳಿಯಲಿ
ಸತ್ವವಿಲ್ಲದೆ ಸತ್ತರೂ ಮರಳುವುದಂತು ಸತ್ಯವು ||

Wednesday, August 22, 2012

|| ಗುರಿ ಮುಟ್ಟುವ ತನಕ ||

ಇಳೆಯನು ಮುಟ್ಟಲು ಹಗಲಲ್ಲಿ ಬರುತಿಹನು ರವಿಯು
ಕತ್ತಲನು ತೊರೆದು ಬೆಳಕಿನಲಿ ಪ್ರಜ್ವಲಿಸುತಿದೆ ಭುವಿಯು
ತನ್ನ ಹಠವ ಬಿದದೆ ಕಿರಣವ ತಲುಪಿಸಿಹನು ಧರೆಗೆ
ದಿನ ಕಳೆದರು ಮುತ್ತಿಕ್ಕಲಾಗದೆ ಕೋಪಗೊಂಡ ಜೀವಕೆ
ದುಗುಡವು ಜಾಸ್ತಿಯಾಗಿ ತಲೆ ಬಾಗಿ ನೋಡುತಿಹನು ||

ಪ್ರತಿದಿನವು ಮೇಲೇರಿ ಬರುತಿಹನು ಮುನ್ನುಗ್ಗಲು
ರವಿ ಬರಲು ಜಗ ಬೆಳಗಲು ಸುಪ್ರಭಾತ ಹೊರಹೊಮ್ಮಲು
ಇಂಪಾದ ರಾಗದಲಿ ಇಬ್ಬನಿಯ ತಂಪಿನಲಿ ಜೀವಗಳು
ಹೊಸದಿನದ ಎಣಿಕೆಯಲಿ, ನವಉಪಾಯದಲಿ ವರ್ತಕರು
ಛಲಬಿಡದೆ ತಿರುಗಿಯತ್ನವ ಮಾಡುತಿಹನು ಗುರಿ ಮುಟ್ಟುವ ತನಕ ||

ಭಾಸ್ಕರನ ಭರವಸೆಯಲಿ ಭುವಿಗೆಲ್ಲಾ ಬೆಳಕು ಸಿಗುತಿದೆ
ಆ ಶಶಿಯ ಬಯಕೆಯಲಿ ಬೆಲದಿಂಗಳೂಟವಾಗುತಿದೆ
ಜಗದಲಿ ಜರುಗುವ ವೈಪರಿತ್ಯದಲಿ ಹಾಜರಿ ಹಾಕಲು
ಕಳಗಿಳಿಯಲಾಗದೆ ಕೈ ಮುಗಿದುಶರಣಾಗುತ ಉಪಗ್ರಹವಾಗಿಹೆ
ತಂಪನ್ನು ನೀಡುತ ಮುನ್ನುಗ್ಗಿ ಬಾ ನೀನು ಗುರಿ ಮುಟ್ಟುವ ತನಕ ||

ಏಕಾಂಗಿ ಒಲವಾಗಿ ಸಂಗಾತಿ ಪ್ರೀತಿ ಸಿಗದೆ ಒದ್ದಾಡುವ
ಬಯಸುತ ಬಳಲುವ ಪ್ರೇಮಿಯಾಸೆ ಗುರಿ ಮುಟ್ಟುವ ತನಕ
ಕಪ್ಪಾಗಿ ಗುಂಪಾಗಿ ಹಾರಿ ಬರುವ ಕರಿಮೋಡದಂತೆ
ಹನಿ ಹನಿ ಧಾರೆಯಾಗಿ ಧರಿತ್ರಿಯನು ಚುಂಬಿಸುತ
ಭುವಿ ಸೇರುವಾಸೆಯು ಮಳೆಗೆ ಗುರಿ ಮುಟ್ಟುವ ತನಕ ||

ರವಿ ಕಾಣದಂತ ಊರಿನಾಚೆಗೆ ಹಾರಿ ಬರುವೆ
ಕವಿ ಕಲ್ಪನೆಗೂ ಸಿಗದಂತೆ ಬದುಕ ನಡೆಸುವೆ
ಒಳಿತನ್ನು ಬಯಸುವ ಪ್ರೀತಿ ಒಲವ ಪಡೆಯುವೆ
ಏನೇನೊ ಇಚ್ಛೆಯಿಟ್ಟು ಮನದಲ್ಲಿ ಬಾಳ ತೇಯುವೆ
ಮನದಾಸೆಯಂತೆ ಬಾಳಲಿಚ್ಛಿಸುವೆನು ಗುರಿ ಮುಟ್ಟುವ ತನಕ ||

Monday, August 20, 2012

|| ಸಂಪ್ರೀತಿ ||

ಆಸೆಯೊಂದು ಚಿಗುರಿತಂದು
ನಿನ್ನ ಮೊಹ ಅರಳಿದಂದು
ನಿನ್ನ ಇರುವು ನನ್ನ ಬರುವು
ಕಾಕತಾಳಿಯವಾದವು
ನಮ್ಮ ಜೀವಗಳು ಬೆರೆಯಲೆಂದು
ಕಾಲ ಕೂಡಿ ಬಂದಿತು ||

ನನ್ನ ನೇರನೋಟಕೆ ನೀ
ಕದ್ದುನೋಡೊ ಓರೆನೋಟ ಬೆರೆಸುತ
ನನ್ನ ಮನವ ಕದ್ದೆ ಅಲ್ಲೆ
ತಿರುಗಿ ದೂರು ನೀಡದಂತೆ
ನನ್ನ ಹೃದಯದಲಿ ನಿನ್ನ ಪ್ರೀತಿ ಬಿತ್ತುತ
ಫಲವ ನೀಡುವಂತೆ ಮಾಡಿದೆ ಹಸಿವನೆಲ್ಲ ನೀಗುಲು ||

ಮುಗುಳುನಗೆಯಲ್ಲೆ ನೀನು
ಸಮ್ಮತಿಯನು ಸೂಚಿಸಿ
ನನ್ನ ಎದೆಗೆ ಕನ್ನ ಹಾಕಿದೆ
ತೊರೆದು ಬದುಕುವ ಯೊಚನೆ ಅಳಿಸಲು
ಮೆಲ್ಲುಸುರಿನ ಗಾಳಿಗೆ ನಂದಾದೀಪ ಹಚ್ಚುತ
ನಂದಾದೀಪ ಬೆಳಗಲು ಭಾಗ್ಯಲಕ್ಷ್ಮೀಯಾಗಿಹೆ ||

Thursday, August 16, 2012

|| ತಾರುಣ್ಯ ||

ಸೂರ್ಯ ಮುಳುಗಿದಾಗ ಸಂಗಾತಿ ನೆನಪು
ಚಂದ್ರ ಮೇಲೆ ಬಂದಾಗ ಸಿಹಿಗನಸ ಕಂಪು
ಕಂಪು ನೆನಪು ಜೊತೆಯಲ್ಲಿ ಬೆರೆತು
ನಿನ ಸೇರೊ ಮಿಡಿತದಲಿ ಎದೆಯಲ್ಲಿ ತಂಪು ||

ಪ್ರೀತಿಯಲಿ ಮುಳುಗಿರುವ ಜೊಡಿಯನು ನೋಡುತ್ತ
ಅವರಂತೆ ನಾನಾಗಬೇಕೆಂಬ ಬಯಕೆಯು ಮೂಡುತ್ತ
ತುಡಿತದಲಿ ಮುನಿಸಾಗಿ ಅಸೂಯೆ ಪಡುತ್ತ
ತನ್ನ ಅದೃಷ್ಠ ಬಯ್ಯುತ್ತ ನಿರಾಸೆಯಲಿ ಮನ ಸೊರಗುವುದು ||

ವಯಸ್ಕರ ಕಂಡಾಗ ಬೇಕೆನಿಸುವ ವಯಸು
ಜೊತೆಯಾಗಿ ನಲಿಯುವ ಕನಸು
ಸಿಗದೆ ಹೋದಾಗ ಬರುವಂಥ ಮುನಿಸು
ನನ್ನನ್ನೊಳಗೆ ಸುಳಿದಾಡುವ ಎಕಾಂಗಿ ಮನಸು ||

ಕನಸಲ್ಲಿ ಕಾಣುವರು ಕಣ್ಮಣಿ ಜೊತೆಗಿನ ಸರಸ
ನನಸಲ್ಲಿ ಮಾಡುವರು ಕಣ್ಮಣಿಯೊಡನೆ ವಿರಸ
ಮನಸಲ್ಲಿ ತುಂಬಿರೊ ಆಸೆಯನು ತಾಳಲಾಗದು
ತರುಣನ ಜೊತೆ ನಡೆದರು ತನ್ಮಯತೆ ಹೇಳಲಾಗದು ||

ಬಯಸಿಹ ಬಾಂಧವ್ಯ ಬಂಧನದಲಿ ಕೊನೆಯಾಗ ಬೇಕು
ಎಲ್ಲರನು ಮೆಚ್ಚಿಸುವ ಕಾರ್ಯವನು ಸುಮ್ಮನೆ ಮಾಡಬೇಕು
ಸಂಗಾತಿ ಸಂಪ್ರೀತಿ ಪಡೆಯಲು ಸುಸ್ತಾಗಿ ಹೋಗಬೇಕು
ಕೊನೆಯಲ್ಲಿ ಜೀವನವೆಲ್ಲ ಜೊತೆಯಾಗಿ ನಡೆದರೆ ಸಾಕು ||