Tuesday, May 8, 2012

|| ಕಣ್ಣಬಿಂದು ||

                                                            
ಕಂಬನಿಯೊಂದು ಜಾರಿಬಂದು
ಅಂತರಾಳದ ನೋವಿನ ಪ್ರತಿನಿಧಿಯೆಂದು
ಸಾಲು ಸಾಲಾಗಿ ವೇದನೆಯನು ಹೊರಗೆತಂದು
ಸಾರಿ ಸಾರಿ ದುಃಖದ ಪರಿಯನು ಪಸರಿಸುತಿದೆ
ನೀ ಸಿಗದೆ ಒಂಟಿ ಜೀವವು ಜಂಟಿಯಾಗದು
ನಗುವ ನಟನೆಯಲಿ ನಂಬಿಸುತ ನಡೆವುದು ||

ನಮ್ಮ ಪ್ರೀತಿ ಗುರಾಣಿಯಂತೆ ಗಟ್ಟಿಯೆಂದು
ತಿಳಿದರೆ ಪೊಪ್ಪಾಯಿಯಂತೆ ಪೊಳ್ಳಾಯಿತು
ಸೇವಂತಿಯಂತೆ ಗುಚ್ಚಾಗಿಯೆಂದುಕೊಂಡರೆ
ಮೋತಿಮಲ್ಲಿಗೆಯಂತೆ ಮುದುಡಿ ಮಬ್ಬಾಯಿತು
ನಿನ್ನ ಅಗಲಿಕೆಯನು ನಂಬಲಾಗದೆ
ಎದೆಯ ಬಡಿತದಲ್ಲೂ ನಿನ್ನ ಹೆಸರೇ ಕೇಳುತಿದೆ ||

ಸಂಗಾತಿಯಾದೆನು ನಿನ್ನೆಲ್ಲ ಬೇಕುಗಳಿಗೆ
ಜೊತೆಯಾಗಿನಿಂತೆ ನಿನ್ನೆಲ್ಲ ಅಗತ್ಯತೆಗೆ
ಸನ್ನೆಯಲೆ ತಿಳಿಸಿದೆ ಸಾವಿರ ಭಾವನೆಗಳನು
ಮೌನದಲಿ ಮೆರೆಸಿದೆ ಮನಸಿನ ಮಾತುಗಳನು
ಹೃದಯವ ಹಿಂಡುತ ಯಾಕೆ ನೀ ದೂರಾದೆ
ನನ್ನಾವ ತಪ್ಪಿಗೆ ಶಿಕ್ಷೆನೀಡಲು ರಕ್ತಹರಿಸಿದೆ ||

ಛಾಯೆಗು ಸಹ ನಾಚಿಕೆಯಾಗುವಂತೆ
ನಿನ್ನ ಬೆಂಗಾವಲಾಗಿ ಹಿಂದೆ ಬಂದೆ
ದೂರಹೋಗಿ ಮರೆಯಾಗಿ ನಿಂತರೆನಂತೆ
ಜೊತೆಯಲ್ಲೇ ಉಳಿವುದು ನಿನ್ನ ನೆನೆಪು 
ಬೆಂಬಿಡದೆ ಹಿಂಬಾಲಿಸುವ ಕರಿನೆರಳಿನಂತೆ
ಬದುಕಾಗದೆ ಇದ್ದರೂ ದೂರದಲಿ ನಗುತಿರು ಎಂದೆಂದು
ಜೀವನ ಕಳೆಯುವೆ ನಿನ್ನ ನೆನಪಲಿ ಹರಿಸುತ ಕಣ್ಣಬಿಂದು  ||

No comments:

Post a Comment