ನನ್ನ ಜೀವ ನೀನೆಂದು
ನುಡಿದೆ ನೀನು ಮಾತೊಂದು
ಉಸಿರು ದೊರೆತು ಜೀವ ಉಳಿಯಿತು
ನಿನ್ನದೇ ಸೂರಲಿ ನಾನು ಬದುಕುವೆ
ನಿನ್ನ ಜೀವ ನಾನೆಂದು
ಜೀವ ಬದುಕಿತು ನನಗೆಂದು
ಕಳೆದುಕೊಂಡು ವ್ಯಥೆಪಡಲಾರೆನು
ಅಂಟಿಕೊಂಡೇ ಇರುವೆ ನನ್ನ ಜೀವನಧಾರೆಯನು ||
ಜಗವ ನೋಡೋ ಕಣ್ಣಿಗೆ ರೆಪ್ಪೆಯಿದ್ದಂತೆ
ನಿನ್ನ ರಕ್ಷಕನಾಗಿರುವೆನು ಸೇವಕನಂತೆ
ನೀ ನನ್ನ ಜೀವಕೆ ರಕ್ಷಿಸೊ ರೆಪ್ಪೆಯಾದಂತೆ
ಕವಚವಾಗಿ ನಾನಿರುವೆನು ನಿನಗೆ
ಜೀವನದ ದಾರಿಯಲಿ ಕಲ್ಲುಮುಳ್ಳು ಸೋಕದಂತೆ ||
ನನ್ನ ಮನಸಿನ ಪ್ರಾಣವು ನೀನು
ಈ ಉಸಿರಿಗೆ ಗಾಳಿಯು ನೀನೆಕಣೆ
ಜಗಕೆಲ್ಲ ಬೆಳಕುಣಿಸುವ ರವಿತೇಜನು
ಮಂಜಾಗಿ ಬಂದರೂ
ನನ್ನ ಸೆಳೆಯಲಾಗದು ನಿನ್ನಿಂದ ||
ಈ ಕಣ್ಣಿಗೆ ದೃಷ್ಠಿಯಾಗು
ನಿನ್ನೊಬ್ಬಳನ್ನೆ ನೋಡುವಂತೆ
ಸ್ವಚ್ಛ ಉಸಿರನು ನೀಡುವ
ಹಚ್ಚಹಸಿರಲಿ ವಿಜೃಂಭಿಸುವಂತೆ
ಆ ಮನ್ಮಥನೇ ಧರೆಗಿಳಿದು ಬಂದು
ರತಿಯಾಗು ಎಂದರೂ
ನಾ ಹೋಗಲಾರೆ ನಿನ್ನಿಂದ ದೂರಾಗಿ ||
No comments:
Post a Comment