Saturday, March 31, 2012

|| ಅಚ್ಚು ||

ನಲ್ಮೆಯಜನರುಕರೆಯುತಾರೆಅಚ್ಚುಅಚ್ಚುಅಚ್ಚು |
ಒಂದುಬಗೆಯಲಿಇವಳಮೊಗವುಕುಂಬಳಕಾಯಿಅಚ್ಚು ||

ಇವಳಿಗೆತುಂಬಆಸೆಯುಂಟುಜೀವನದಲ್ಲಿಒಂದು |
ಎಲ್ಲರುಇವಳನುಕರೆಯಬೇಕುಡುಮ್ಮುಡುಮ್ಮುಎಂದು ||

ಜೀವನಮೌಲ್ಯವಅರಿತಿದ್ದಾಳೆಎಲ್ಲರಿಗಿಂತಹೆಚ್ಚು |
ಆಗಆಗಬಿಡಿಸುತ್ತಾಳೆನಮ್ಮತಲೆಯಹುಚ್ಛು ||

ಸ್ನೇಹಿತೆಯಾಗಿಕೇಳುತ್ತಾಳೆಹೃದಯದನೋವಿನಹೆಪ್ಪು |
ಸೋದರಿಯಾಗಿಹೇಳುತ್ತಾಳೆನಮ್ಮತಪ್ಪುಒಪ್ಪು ||

ಎಲ್ಲರಕಾಲನುಎಳೆಯುತ್ತಾಳೆತುಂಬಾಖುಷಿಯಲಿಇವಳು |
ಬಾಯಿಗೆಬೀಗಹಾಕಿದಳಂದರೆಅದೆಕೋಪತಾಪದಗೀಳು ||

ದುಂಡನೆಮೊಗದಲಿಕಂಗೊಳಿಸುತಿದೆಸುಲೋಚನ |
ಹೃದಯವಿಶಾಲತೆಮೆರೆಯುವಳುಪ್ರತೀದಿನ ||

ಸುಂದರನಾರಿಯಜೀವನವಾಗಲಿಹಾಲುಜೇನು |
ಸಿಗಲಿಸುಕುಮಾರನುಇವಳಿಗೆತೆಗೆಯುವಂತವನುತಲೆಯಹೇನು ||

|| ಶುಭರಾತ್ರಿ ||

ಸೂರ್ಯನಿಲ್ಲಬಾನಿನಲ್ಲಿ
ಬೆಳದಿಂಗಳತಂಪಿನಲಿ
ಕಾಣುವಮುನ್ನಸಿಹಿಗನಸನು
ಹೇಳುವೆನಿಮಗೆಲ್ಲಶುಭರಾತ್ರಿ...||

|| ಶುಭೋದಯ ||

ಕತ್ತಲೆಯನೂಕುತ್ತರವಿಬರುವಸಮಯ
ಮರಗಳನಡುವಿನಲ್ಲಿಹಕ್ಕಿಗಳನಾದಮಯ
ಶುಭಮುಂಜಾನೆಯಿಂದಹೊಸದಿನದಉದಯ
ಸಹೃದಯರಿಗೆಲ್ಲಹೇಳುವೆನುನನ್ನಶುಭಾಶಯ...||

|| ಈಜುವ ಕನಸು ||

ಈಜುವಕಲೆಯನುಕಲಿತೆನುನಾನು..
ಸಾಗರದಾಟುವಆಸೆಯಕಂಡು...
ಶಬ್ದವುಕೇಳಿತುಸಾಗರದಂತ್ಯದಿ..
ನಿಂತಿದ್ದರುಎಲ್ಲರುಮಂಚದಿಂದಬಿದ್ದನನ್ನಎದುರಲಿ.... ||

Friday, March 30, 2012

|| ಕೊನೆಯ ಕವಿತೆ ||

ಕನಸಲಿ ಕಂಡ ಆಸೆಗಳನ್ನು ನನಸಾಗಿಸಲು
ಇಡೇರಿಸ ಬಯಸಿತು ಜೀವನದಂತ್ಯದವರೆಗೂ
ಸ್ವಪ್ನವ ಕಾಣುವ ಅರ್ಹತೆಯಿಲ್ಲವೆ ಬಡಜೀವಕೆ?
ಮನಸಿನ ಬಾವನೆ ಹಂಚಿಕೊಳ್ಳಲು ಸಂಗಾತಿ ಅವಶ್ಯವೇ? ||

ಕನಸನು ಕಾಣುತ ಬದುಕಿದೆ ಜೀವವು ಮೊದಲಿನಿಂದಲೂ
ನೋಡಿತು ಜೀವನದಲ್ಲಿ ಎಲ್ಲ ರೀತಿಯ ಏರಿಳಿತವನ್ನ
ಒಂಟಿ ಜೀವವು ಜಂಟಿಯಾಗಲು ಬಯಸುತ ಅರಸಿದೆ
ಸಿಗದೇ ಹುಡುಕಿತು ಊರೂರ ಮೂಲೆ ಮೂಲೆಗಳನ್ನ ||

ಹೃದಯದ ಮಾತನು ಬರೆಯುತ ಕಳೆಯಿತು
ಜೀವನವಾದರು ಗೆರೆಯೇ ಇಲ್ಲದ ಖಾಲಿ ಕಾಗದ
ಸರಸವೆ ಇಲ್ಲದ ಬದುಕಲಿ ವಿರಸವೂ ಮೂಡದೆ
ಲೇಖನ ಮುಗಿಸಿತು ಲೇಖಿಸಿ ಕೊನೆಯ ಕವಿತೆ ||

Tuesday, March 27, 2012

|| ಮನಸುಗಳು ದೂರ ದೂರ ||

ಸಂತೋಷದಲಿ ಇದ್ದರು ನಗುನಗುತ
ಪರಿಚಯವಾಯಿತು ಅಂತರ್ಜಾಲದಲಿ
ಹೀಗೆ ನಡೆಯಿತು ಸಲ್ಲಾಪ ಸಂಗತಿಗಳು
ಇಬ್ಬರಿಗೂ ವರ್ತನೆಗಳು ಹಿಡಿಸಿದವು ಎದೆಯಾಳದಲಿ ||

ಪರಿಚಯದ ಆಳ ಜಾಸ್ತಿ ಆಗುತ್ತಾಹೋಯಿತು
ದೂರವಾಣಿ ಸಂಖ್ಯೆಗಳನು ವಿನಿಮಯ ಮಾಡುವಷ್ಟು
ಮಾತನಾಡುತ್ತ ಇಬ್ಬರ ಜಾತಿ ಬೇರೆಂದು ತಿಳಿಯಿತು
ಪರಿಚಯ ಪ್ರೀತಿಯಾಯಿತು ಮನಸುಗಳು ಹತ್ತಿರವಾದಷ್ಟು ||

ಇವನ ಕನಸಿನಂತೆ ಅವಳು, ಅವಳ ಕನಸಿನಂತೆ ಇವನು
ಬಾಹ್ಯ ಅಂದಕೆ ಬೆಲೆ ಕೊಡದೆ ಅವರಿಬ್ಬರಾದರು ಹತ್ತಿರ
ಮನಸಿನ ತುಡಿತದಂತೆ ಸ್ವಲ್ಪ ಸಮಯಕೆ ಭೇಟಿಯಾದರು
ಮುಂದೆ ಎದುರಾಗುವ ತೊಂದರೆಯ ಯೋಚಿಸಿ ತತ್ತರ ||

ಅವರಿಬ್ಬರ ನಡುವೆ ನಡೆಯಿತು ಜಾತಿಯ ನರ್ತನ
ಅತೃಪ್ತಿಕರವಾದ ಹುಡುಗಿಕಡೆಯವರ ವರ್ತನೆ
ದೂರಾಗುವುದು ಸತ್ಯವೆಂದು ತಿಳಿದು ದೂರದೂರಿಗೆ ಹೋದರು
ಪರಸ್ಪರ ಶುಭಕಾಮನೆ ಕೋರುತ್ತ ಮನಸುಗಳು ದೂರ ದೂರ ||

||ಅದೃಷ್ಠದಾಟ||

ಕಾಲ ಹೇಗೋ ಕಳೆದರು
ನಾನಾ ರೀತಿ ಮನವ ಕಾಡಿದರು
ತಿಳಿವುದೊಂದೆ ಎಲ್ಲರೆದುರಲಿ
ಅದೃಷ್ಠದಾಟ ನಮ್ಮ ಬಾಳಲಿ ||

ಜನಿಸಿದಾತ ಮಾನವನಾಗಿ ಅದೃಷ್ಠದಿ
ಕಳೆದನವನು ಬಾಲ್ಯವ ಸಂತೋಷದಿ
ಸಮಯ ಚೆನ್ನಾಗಿರಲು ಅವಗೆ
ಮಾಡಿದ್ದೆಲ್ಲ ಅಗುವುದು ಒಳ್ಳೆಯದು ||

ಸೋಲು ಗೆಲುವು ನೋಡದೆ ಮುನ್ನುಗ್ಗಲು
ಸಂದರ್ಭಕ್ಕೆ ತಕ್ಕಂತೆ ಸೌಕರ್ಯ ಸಿಗಲು
ಏನೂ ತೊಡಕು ಎದುರಾಗದೆ ಇದ್ದಾಗ
ಒಡುವುದು ದುರಾದೃಷ್ಠವು ದೂರಾಚೆ ||

ಮನಸ್ಸಿದ್ದರೂ ಮಾಡಲಾಗದೆ ಕೈಕಟ್ಟಿಕೂತಾಗ
ಮೆಚ್ಚದ ವರ್ತನೆಯನ್ನು ಸ್ವಾಗತಿಸಿದಾಗ
ಪರಿಸ್ಥಿತಿ ತಿಳಿದಿದ್ದರೂ ತಿಳಿಯದಂತೆ ವರ್ತಿಸಿ
ಸಹಕರಿಸುವ ಕೈಗಳಿದ್ದರೂ ಸಹಕಾರ ದೊರೆಯದೇ
ದುರಾದೃಷ್ಠದ ಬೇಗೆಯಲ್ಲಿ ಅದೃಷ್ಠದಾಟ ನಡೆವುದು ||