Sunday, December 9, 2012

|| ಕಲ್ಪನೆ ||

ಮನಸಿನ ಮಾತುಗಳು ಹೇಳೋ
ಕನಸಿನ ಕವನಗಳು
ಕಲ್ಪನೆ ಮಾಡುತ
ಕನಸನು ಕಾಣುತ
ಕಾಣದೂರಿನ ದೊರೆಯಾಗಿ
ಮೆರೆಯುವೆನು ||

ಮಿತಿಯೆ ಇಲ್ಲದ
ಅಗಲವಾದ
ಕೊನೆಯನು ಕಾಣದ
ಸರ್ವ ಜೀವಿಗಳು
ಬಗೆಬಗೆಯಲಿ ಕಾಣುವರು ಕಲ್ಪನೆಯ
ಕಣ್ಣ ತುಂಬ ನಿನದೆ ಬಿಂಬ
ಕಪ್ಪು ಛಾಯೆಯು ತಂಪ ನೀಡುತಿದೆ ||

ಆಳಾಗಿ ದುಡಿಯಬಹುದು
ಅರಸನಾಗಿ ಭೋಗಿಸಬಹುದು
ಮನಸಿನಾಸೆಯಂತೆ ಮೆರೆಯಬಹುದು
ತಲುಪಲಾಗದ ಗುರಿಯನು
ಮುಟ್ಟಿದಂತೆ ಹಿಗ್ಗಬಹುದು
ಈಡೇರದ ಬಯಕೆಗಳಲಿ
ತೇಲಬಹುದು ಕಲ್ಪನೆಯಲಿ ||

ನೋವಿನಲಿ ನೊಂದ ಜೀವ
ಕೆಟ್ಟ ಕನಸೆಂದು ಮರೆಯಬಹುದು
ಸಾಧಿಸಿರದ
ಅನುಭವಿಸಲಾಗದ
ನಲಿವಿನ ಸಂಭ್ರಮ
ಸ್ವಂತದೆಂದು ಹೆಮ್ಮೆ ಪಡುವ
ಸ್ಥಿತಿಯು ನಮ್ಮ ಕಲ್ಪನೆ ||

Monday, December 3, 2012

|| ಲೇಖನ ||

ಗುನುಗುವ ರಾಗಕೆ
ಬರೆಯುವ ಪದಗಳು
ಎದೆಯಲಿ ಆಗುವ ನೋವುಗಳು
ಮನತುಂಬಿ ನಗುವ ನಲಿವುಗಳು
ಕಲ್ಪನೆಯಲಿ ಕಾಣುವ ಕನಸುಗಳು
ಹರಸುತ ಹಾಡುವ ಹಾರೈಕೆಗಳು ||

ಲಿಪಿಯಾಗಿ ಲೇಖಿಸುತ
ಹೊರಹೊಮ್ಮುವ ಭಾವನೆಯನು
ರಾಗದಲಿ ಹಾಡುವ ಆಸೆಯನು ಕಾಣುತ
ಗೀಚುತ ಭಾವವ ಲೇಖಿಸಲು
ಅನುಭವಿಸುವೆನು ಖುಷಿಯನು
ಅಂತರಾಳದಲಿ ನೆಮ್ಮದಿಯನು ||

ಸುಮ್ಮನೆ ಬರೆಯುವ ಪದಗಳು ಕೂಡ
ಅಭಿಮಾನಿಗಳನು ಸೃಷ್ಠಿಸುವುದು
ಹರಿಸುವುದು ಹರುಷದ ಹೊಳೆಯನು
ಮೊನಚಾದ ಮುಳ್ಳಿನಂತೆ ತಾಕಲು
ಪಹರೆಯ ಹಾಕುತ ಎಚ್ಚರಿಸುವುದು
ಲೇಖಿಸಿ ಕಳೆಯುವ ಕಾಲಹರಣದ ಲೇಖನವು ||

Thursday, November 29, 2012

|| ಬದುಕು ಮೂರೆ ದಿನ ||

ಅನಿಸಿದ ಪದಗಳನು
ಬರೆಯುತ ಕಳೆಯುವೆನು
ಸಾಗುತ ದೂರ
ಬಯಸುತ ತೀರ
ಪಯಣವು ಕಾಣದ ದಾರಿಯಲಿ ||

ಜೀವನ ಇಷ್ಟೇನೆ
ನಮ್ಮ ಬದುಕು ಕಷ್ಟಾನೆ
ಬಯಸಿದ ಬದುಕನು
ಸಾಕಾರ ಗೊಳಿಸಲು
ನಿಲ್ಲದು ನಿರಂತರ ಹೋರಾಟ ||

ಆದಿಯಲಿ ಆಸೆಯು
ಅಂತ್ಯವನು ತಲುಪಲು
ಬವಣೆಯು ನಡುವಿನಲಿ
ಜನಿಸಲೊಂದು ದಿನ ಸಾವಿಗೊಂದು ದಿನ
ಬಾಳಲೊಂದು ದಿನ ಬದುಕು ಮೂರೆ ದಿನ ||

|| ಸೊಗಸು ||

ಹಾಡುತ ಹೃದಯದ ಗೀತೆ
ಬರೆಯುತ ಒಲವಿನ ಕವಿತೆ
ನೋಡಿದ ಕ್ಷಣದಲಿ ಮನವು
ರಮಿಸುತ ಬಯಸಿದೆ ಮಡಿಲನು
ಸಾಹಿತಿ ಮಾಡಿತು ನನ್ನನು ||

ನಿನ್ನ ರೂಪ ಬಣ್ಣಿಸಲು
ಬರೆವೆನೆಂದು ಕವನವ
ಪಲ್ಲವಿಯೆ ಇಲ್ಲದ ಚರಣವ
ಗಾನಸುಧೆಯ ಹರಿಸಲೆಂದು
ಕಲಿವೆ ಶಾಸ್ತ್ರೀಯ ಸಂಗೀತವ ||

ಛಾಯಾಚಿತ್ರ ಬಿಡಿಸುತ
ಶಿಲ್ಪಿಯಾಗ ಬಯಸುತ
ಹರಿದೆ ನೂರು ಹಾಳೆಯ
ವರ್ಣಿಸಲಾಗದ ನಿನ್ನಯ ಸೊಬಗನು
ಕಣ್ತುಂಬ ನೋಡಲು ಬಲು ಸೊಗಸು ||