ಗುನುಗುವ ರಾಗಕೆ
ಬರೆಯುವ ಪದಗಳು
ಎದೆಯಲಿ ಆಗುವ ನೋವುಗಳು
ಮನತುಂಬಿ ನಗುವ ನಲಿವುಗಳು
ಕಲ್ಪನೆಯಲಿ ಕಾಣುವ ಕನಸುಗಳು
ಹರಸುತ ಹಾಡುವ ಹಾರೈಕೆಗಳು ||
ಲಿಪಿಯಾಗಿ ಲೇಖಿಸುತ
ಹೊರಹೊಮ್ಮುವ ಭಾವನೆಯನು
ರಾಗದಲಿ ಹಾಡುವ ಆಸೆಯನು ಕಾಣುತ
ಗೀಚುತ ಭಾವವ ಲೇಖಿಸಲು
ಅನುಭವಿಸುವೆನು ಖುಷಿಯನು
ಅಂತರಾಳದಲಿ ನೆಮ್ಮದಿಯನು ||
ಸುಮ್ಮನೆ ಬರೆಯುವ ಪದಗಳು ಕೂಡ
ಅಭಿಮಾನಿಗಳನು ಸೃಷ್ಠಿಸುವುದು
ಹರಿಸುವುದು ಹರುಷದ ಹೊಳೆಯನು
ಮೊನಚಾದ ಮುಳ್ಳಿನಂತೆ ತಾಕಲು
ಪಹರೆಯ ಹಾಕುತ ಎಚ್ಚರಿಸುವುದು
ಲೇಖಿಸಿ ಕಳೆಯುವ ಕಾಲಹರಣದ ಲೇಖನವು ||
No comments:
Post a Comment