Sunday, February 27, 2011

|| ಹೊಂಬೆಳಕು ||

ಮೂಡಿದೊಂದು  ಕಿರಣದಿಂದ
ಜ್ಯೋತಿಯೊಂದು  ಬಳಿಗೆಬಂದು
ಕತ್ತಲಲ್ಲಿ ಕಣ್ಣು ತೆರೆಸಿದೆ
ಮನಕೆ ಕವಿದ ಮೊಡ ಕರಗಿದೆ...||

ಹುಟ್ಟಿನಿಂದ ಬಂದರೇನು...?
ಸ್ನೆಹದಿಂದ ಆದರೇನು...?
ಮನದ ಮಿಲನವೊಂದೇ ತಾನೆ
ಬಾಳ ಬೆಳಗೊ ಸಂಬಂಧವು...||

ಸ್ವಂತಿಕೆಯನು ಮಾರಿಕೊಂಡು
ಪರರ ತಾಳಕೆ ಕುಣಿದುಕೊಂಡು
ಮುರ್ಖತನದಲಿ ಮುರಿಯಬಹುದೇ..?
ಮೌಲ್ಯಯುತವಾದ  ಸಂಬಂಧವ....||

ಬುದ್ಧಿವಾದವ ಹೇಳಬೇಡ
ತನ್ನತನವೇ ಇಲ್ಲದವಗೆ
ಹಿತನುಡಿಯ ತಪ್ಪಾಗಿ ತಿಳಿದರೆ
ಕಪ್ಪಾಗಿ  ಹೋಗುವುದು ಸಂಬಂಧವು...||

ಮೋಹದಿಂದ ಮರುಳನಾಗಿ
ನೋವನೆಂದು ಆಮಂತ್ರಿಸದಿರು
ಒಳ್ಳೆತನದಿ ಕಣ್ತೆರೆದು ನೋಡು
ಹೊಂಬೆಳಕಾಗಿ ಬರುವುದು ಸಂಬಂಧವು...||

1 comment: