1
ಮನವು ಅಹಂಕಾರದ ಪರದೆಯಲಿಮರೆಯಾಗಿ ಬೀಹಗುತಿದೆ ಗರ್ವದಲಿ
ತನದೊಂದೆ ಸರಿಯೆಂಬ ದರ್ಪವು
ತನ್ನಿಂದಲೆ ಚಲಿಸುವುದು ಎಲ್ಲವು
ಹೊಂದಿಕೆಯು ಹರಿದೋಗಿದೆ ಅಂದು
ಕೃಪೆಯಿಂದ ಹೊಲಿಯಬೇಕಿದೆ ಇಂದು
ಜಗದ ಕೋಪಕೆ ಶಿಕ್ಷಾರ್ಹನು
ಜನರ ಶಾಪಕೆ ಪರಿತಪಿಸುತಿಹೆನು
ಜ್ಞಾನದ ಬೆಳಕನ್ನಿತ್ತು ಪರಿಪಾಲಿಸು
ಜೊತೆಯಲ್ಲಿ ಕೈ ಹಿಡೀದು ಮುನ್ನೆಡೆಸು
2
ಹಣತೆಯಲಿ ಅರಳಿದ ಹೂಕತ್ತಲೆಯನು ಕರಗಿಸುವ ಪ್ರಜ್ವಲೆಯು
ಅಪ್ರಿಯ ಅಂಧಕಾರಕೆ ಅಂತ್ಯವು
ಜ್ಞಾನಧಾರೆಯು ಮೂರ್ಖತನಕೆ
ನಿನ್ನಳಿವಿಗೆ ಬೆಳಗುವೆ ಜೋರಾಗಿ
ಜೀವನದ ದಾರಿದ್ರ್ಯ ದೂರಾಗಿಸುವ
ಸಮೃದ್ಧಿಯ ದಿವ್ಯ ದೀಪ
No comments:
Post a Comment