ದೂರ ದೂರ ಮನದೊಳಗಿನ ಮಾತು ಭಾರ
ಹಾರ ಹಾರ ಹಿಡಿದು ನಿಂತೆ ಎದೆಯ ತೀರ
ಹೇಗೆ ಮಾಡಲಿ ಒಲಿದು ಬಂದ ಮನದಲಿ
ತುಸುಹೆಜ್ಜೆಯಿಡದಂತೆ ಭಾವ ತೀರ ಯಾನ
ಗುಡುಗು ಮಿಂಚುಗಳ ಆರ್ಭಟಕ್ಕೆ ಗಗನವಿದೆ
ಭಾವನೆಗಳ ಹೊಯ್ದಾಟದಕೆ ನನ್ನ ಮನದಲಿ
ನಿನ್ನ ಬಯಕೆಗಳ ಉಳಿವಿಗೆ ಮನೆ ಮಾಡಿದೆ
ಗುರುತಿಸಲು ಅಳತೆಗೆ ಸಿಗದಂತಹ ಕೋನ
ನಿನ್ನಾಸೆಗೆ ಸ್ಪಂಧಿಸಿದರೆ ನಮ್ಮ ಬಾಳು ಜೀವಂತ
ನಂಬಿಕೆಯಿರದಿರೆ ತಿಳಿಯದು ಕೊನೆಯಾಸೆ ಹೇಗಂತ
ಅನುಮಾನವೇ ಅಪನಂಬಿಕೆಯ ಮೆಟ್ಟಿಲು ಆದರೆ
ಸಹಿಸಲಾಗದ ಕಿರಿಕಿರಿ ರಗಳೆಗೆ ಹೋಗದಿರಲಿ ಮಾನ
ಭಾವನೆಗಳ ಹೊಯ್ದಾಟ ಅಳೆಯಲಾಗದ ಕೋನವೇ ಸರಿ
ReplyDeleteಮಾನಕಿಂತಲು ಮೊಗಿಲೇನಿದೆ ಮಾಲ್ಕು ದಿನದ ಈ ಬಾಳಿನಲಿ? ಅಲ್ಲವೇ!
ReplyDelete