ಇಂಪಾದ ರಾಗದಲ್ಲಿ
|
ನನ ಮದುವೆಯ ಕರೆಯೋಲೆ
|
ನೀ ನೀಡು ಓ
ಕೋಗಿಲೆ
|
ಗರಿ ಬಿಚ್ಚಿ ನಾಟ್ಯವಾಡಿ
|
ಆಕರ್ಷಿಸಿ ಸ್ವಾಗತವ
|
ನೀ ಕೋರು ಓ
ನವಿಲೆ
|
ನಿಮ್ಮೊಂದಿಗೆ ನಾ ಕಳೆದ
|
ನೆನಪನ್ನು ಮೆಲಕುತ
|
ಇನಿಯನೂರಿಗೆ ನನ್ನ
|
ಕಳುಹಿಸಿಕೊಡ ಬನ್ನಿರೆ
|
ನಾ ಜೊತೆಯಾಗಿ
|
ಹೊರದುವ ಮುನ್ನ
|
ಬಳಿಬಂದು ಹರಸುತ
|
ಹೋಗಿ ಬಾ ಎಂದು
|
ಬಿಳ್ಕೊಡುವಿರಲ್ಲವೆ ||
|
ಈ ಹರಿವ ನೀರಿನಲಿ
|
ಮಿಂದು ಪುಳಕಿತನಾಗಲು
|
ತಾಯಿ ಶರಾವತಿಯ
|
ಕೃಪೆಯು ಇಹುದಲ್ಲವೆ
|
ವಿಶಾಲವಾದ ಗದ್ದೆಯಲಿ
|
ಬೆಳೆದಿರುವ ತೆನೆಯನ್ನು
|
ಕಿತ್ತು ತಿಂದು
|
ಬಲವಾಗಿ ಬೆಳೆದಿರುವುದು
|
ನಿಜವಲ್ಲವೆ ||
|
ಆ ಗುಡ್ಡ ಬೆಟ್ಟದಲಿ
|
ತುಂಬಿರುವ ಹಸಿರಿನಲಿ
|
ಅಡಗಿರುವ ನನ್ನ ಉಸಿರನ್ನು
|
ಧಾರೆಯೆರೆಯಿರಿ
|
ಹುಟ್ಟಿಂದ ಜೊತೆಯಿರುವ
|
ನಿಮ್ಮನ್ನು ನಾ
|
ತೊರೆದು ಹೊರಟಿರುವೆ
|
ಹರಸಿರಿ ನಮ್ಮನು
|
ಬಯಸಿರಿ ನಮ್ಮ
|
ಏಳಿಗೆಯನು ||
|
ರವಿ ಕಾಣದ ಊರಲ್ಲಿ ಕವಿ ಕಲ್ಪಿಸದ ರೀತಿಯಲಿ ನನ್ನೊಲುಮೆಯ ಜೊತೆಯಲ್ಲಿ ಬದುಕುವ ಆಸೆಯು ಮನದಲ್ಲಿ
Friday, June 13, 2014
|| ತೊರೆದು ಹೊರಟಿರುವೆ ||
Subscribe to:
Post Comments (Atom)
ಪ್ರಕೃತಿಯಲೇ ಹುಟ್ಟಿದ ಆಕೆಯನ್ನು 'ನಿತ್ಯ ಹರಿದ್ವರ್ಣೆಯಾಗಿರು' ಎಂದೇ ಹರಸಿ ಕಳಿಸುತ್ತೆ ತಾಯೆ ಧರಿತ್ರೀ.
ReplyDelete