Friday, January 11, 2013

|| ತತ್ಕಾಲಿಕ ||


ಮಂಜು ಕರಗಿ ಹನಿಯಾದರೆನಂತೆ
ಮುಂಜಾವಿನ ನೀರು ಮಳೆಯಾಗದು
ಉರಿಯಲಿ ಬೆವೆತು ಒದ್ದೆ ಯಾದರು
ಮಿಂದಂತೆ ಮೈ ಮನ ಶುಚಿಯಾಗದು ||

ಬರುವ ನೀರನು ಹೊರ ಹಾಕಿ ಹರಿಸಿದರೂ
ತಿರುಗಿ ತುಂಬಿವ ಭರವಸೆಯುಂಟು ಕಣ್ಣಿಗೆ
ಹರಿವ ನೀರದು ನಿಲ್ಲದು ಹೊಸ ನೀರು ಬಂದಾಗ
ಹಳೆ ನೀರು ಹೊರಡುವುದು ಕೊನೆಕಾಣುತ ||

ಅಡೆಕೆ ಕದ್ದಾಗ ಹೋದ ಮಾನವು
ಆನೆ ಕೊಟ್ಟರೂ ಮರಳದು
ಸಣ್ಣ ಕೆಲಸದಲಿ ಹೋದ ನಂಬಿಕೆ
ಜೀವ ಕೊಟ್ಟರೂ ಮರಳದು ||

ನೀರ ಅಲೆಯಲಿ ಚೂರಾದ ಚಂದ್ರನು
ಸ್ವಛ್ಚಂದದ ಬಾನಿನಲಿ ಚಂದವು
ಹಲವರು ಸೇರಿ ಮರ್ಯಾದಿ ತೆಗೆದರೂ
ಒಳ್ಳೆತನವ ಕೊಲ್ಲಲಾಗದು ಮಾತಿನಲಿ ||

No comments:

Post a Comment