ಮೂಡಿದೊಂದು ಕಿರಣದಿಂದ
ಜ್ಯೋತಿಯೊಂದು ಬಳಿಗೆಬಂದು
ಕತ್ತಲಲ್ಲಿ ಕಣ್ಣು ತೆರೆಸಿದೆ
ಮನಕೆ ಕವಿದ ಮೊಡ ಕರಗಿದೆ...||
ಹುಟ್ಟಿನಿಂದ ಬಂದರೇನು...?
ಸ್ನೆಹದಿಂದ ಆದರೇನು...?
ಮನದ ಮಿಲನವೊಂದೇ ತಾನೆ
ಬಾಳ ಬೆಳಗೊ ಸಂಬಂಧವು...||
ಸ್ವಂತಿಕೆಯನು ಮಾರಿಕೊಂಡು
ಪರರ ತಾಳಕೆ ಕುಣಿದುಕೊಂಡು
ಮುರ್ಖತನದಲಿ ಮುರಿಯಬಹುದೇ..?
ಮೌಲ್ಯಯುತವಾದ ಸಂಬಂಧವ....||
ಬುದ್ಧಿವಾದವ ಹೇಳಬೇಡ
ತನ್ನತನವೇ ಇಲ್ಲದವಗೆ
ಹಿತನುಡಿಯ ತಪ್ಪಾಗಿ ತಿಳಿದರೆ
ಕಪ್ಪಾಗಿ ಹೋಗುವುದು ಸಂಬಂಧವು...||
ಮೋಹದಿಂದ ಮರುಳನಾಗಿ
ನೋವನೆಂದು ಆಮಂತ್ರಿಸದಿರು
ಒಳ್ಳೆತನದಿ ಕಣ್ತೆರೆದು ನೋಡು
ಹೊಂಬೆಳಕಾಗಿ ಬರುವುದು ಸಂಬಂಧವು...||