ಅದೊಂದು ದಿನ ಅವನ ಹುಟ್ದಬ್ಬ. ಶುಭಾಶಯಗಳ ಹೊಳೆಯೇ ಹರಿದುಬರುತ್ತಿತ್ತು. ಗೆಳೆಯನ ಮನೆಗೆಂದು ಹೋಗಿದ್ದ ಅವನು ಹುಟ್ದಬ್ಬದ ದಿನ ಬಸ್ಸಿನಲ್ಲಿ ಬರುತ್ತಿದ್ದಾಗ ಅನಿರೀಕ್ಷಿತವಾದ ಕರೆಯೊಂದು ಬಂದಿತು. ಏನಪ್ಪ ಇದು ಆದಿತ್ಯವಾರವಾದರೂ ನೆಮ್ಮದಿಯಿಂದಿರಲು ಬಿಡುವುದಿಲ್ಲವಲ್ಲ ಎಂದು ಗೊಣಗುಡುತ್ತ ಕರೆಯನ್ನು ಸ್ವೀಕರಿಸಿದ. ಆಗ ಕರೆ ಮಾಡಿದ್ದ ಮ್ಯಾನೇಜರ್ ಹೇಳಿದ, ಅಭಿನಂದನೆಗಳು ಎಂದು. ಆದರೆ ಅವನು ಅಂದ್ಕೊಂಡ ಹುಟ್ದಬ್ಬದ ಶುಭಾಶಯದ ಬದಲು ಅಭಿನಂದನೆಯೆನ್ನುತ್ತಿದ್ದಾರೆ ಎಂದುಕೊಂಡು ಧನ್ಯವಾದಗಳೆಂದನು.
ಮಾತನ್ನು ಮುಂದುವರೆಸಿದ ಮ್ಯಾನೇಜರ್ ಕೇಳುತ್ತಾರೆ ನಿನಗ್ಯಾಕೆ ಅಭಿನಂದನೆ ಹೇಳಿದೆಯೆಂದು ಗೊತ್ತಾಯಿತಾ ಎಂದು ಕೇಳಿದರೆ ನಾನು ಇಲ್ಲವೆಂದೆ. ಆದರೆ ನಿಮಗೆ ಹೇಗೆ ಇಂದು ನನ್ನ ಹುಟ್ದಬ್ಬವೆಂದು ತಿಳಿಯಿತು ಎಂದು ತಿರುಗಿ ಕೇಳುತ್ತಾನೆ. ಆಗ ಮ್ಯಾನೇಜರ್, ಒಹ್ ಏನು ಇಂದು ನಿನ್ನ ಹುಟ್ದಬ್ಬ ಕೂಡನಾ? ಹಾಗಾದ್ರೆ ಇದು ನಿನಗೆ ಇಮ್ಮಡಿಯ ಖುಷಿಯ ಸಮಯವೆನ್ನುತ್ತಾನೆ. ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ತಿಳಿಯದೆ, ಯಾಕೆ ಸರ್ ಹೀಗೆ ಹೇಳುತ್ತಿದ್ದೀರಿ? ನೀವು ನನ್ನ ಹುಟ್ದಬ್ಬಕ್ಕೆ ಶುಭಾಶಯ ಕೋರಲು ಕರೆ ಮಾಡಿದ್ದೀರಿ ಅಂತಂದುಕೊಂಡೆ ಆದರೆ ಈಗ ನಿಮ್ಮ ಮಾತನ್ನು ಕೇಳಿ ನನಗೇನೆಂದು ಅರ್ಥವಾಗುತ್ತಿಲ್ಲ. ದಯವಿಟ್ಟು ಸರಿಯಾಗಿ ತಿಳಿಸಿ ಹೇಳಿ ಎಂದಾಗ ಅವರು ಹೇಳುತ್ತಾರೆ, ಮೊದಲು ಹುಟ್ದಬ್ಬದ ಪಾರ್ಟಿ ಕೊಡು ನಂತರ ಹೇಳುತ್ತೇನೆ ಎನ್ನುತ್ತಾರೆ. ಸರಿ ಸಾರ್ ಇಂದು ಸಂಜೆ ಸಿಗಿ ಕೊಡಿಸುತ್ತೇನೆ ಎಂದಾಗ, ನನಗೆ ನಿನ್ನ ಪಾರ್ಟಿ ಬೇಡ ಮೊದಲು ನೀನು ಪುಣಾಕ್ಕೆ ಹೊರಡಲಿಕ್ಕೆ ತಯಾರಾಗು, ಯಾಕೆಂದರೆ ಅಧಿಕೃತ ತಂಡದ ಮುಂದಾಳುವಾಗಿ ನಿನ್ನೋಬ್ಬನೇ ನೇಮಕವಾಗಿದ್ದೀಯ ಹಾಗಾಗಿ ನಾಳೆ ಬೆಳಿಗ್ಗೆಯೇ ನೀನು ಪುಣಾದಲ್ಲಿರಬೇಕು ಎನ್ನುತ್ತಾರೆ. ಇದು ಅವಸರದ ಅವಶ್ಯಕತೆ ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡ, ಇಂದು ರಾತ್ರಿಯೊಳಗಾಗಿ ಪುಣಾದಲ್ಲಿರು ಎಂದು ಹೇಳಿತ್ತಾರೆ. ಆಗ ಧನ್ಯೋಸ್ಮಿ ಎಂದು ಹೇಳಿದ ಅವನಿಗೆ ಆದ ಖುಷಿಗೆ ಪಾರವೇ ಇರ್ಲಿಲ್ಲ.
ಆದರೆ ಪುಣಾದ ಹೆಸರನ್ನು ಮಾತ್ರ ಕೇಳಿದ್ದ ಅವನು ಆಲ್ಲಿಯವರೆಗೆ ಒಮ್ಮೆಯೂ ಪುಣಾವನ್ನು ನೋಡಿದವನಲ್ಲ. ಅಲ್ಲದೇ ಪರಿಚಯದರ್ಯಾರೂ ಅಲ್ಲಿರಲಿಲ್ಲ. ಆದರೂ ಧೈರ್ಯದಿಂದ ಪುಣಾಕ್ಕೆ ಹೊರಡಲು ಸಿದ್ಧನಾಗಿ ವಿಮಾನದ ಮೇಲೆ ಹೋಗಿ ಹೊಸ ಊರಿಗೆ ಕಾಲಿರಿಸಿದೆ. ಆಗ ಹಿಂದಿ ಭಾಷೆಯನ್ನು ಸುಟ್ಟುಕೊಂಡು ತಿನ್ನಲೂ ಸಹ ಬರುತ್ತಿರಲಿಲ್ಲ. ಹೊಸ ಊರು, ಹೊಸ ಜನರ ನೆಲದಲ್ಲಿ ವಿಳಾಸಕ್ಕೆ ಅರಸಿ ತಲುಪ ಬೇಕಾದ ಸ್ಥಳ ತಲುಪಿದ ಅವನು ಯಾವುದೋ ಒಂದು ಹೊಟೆಲ್ ನಲ್ಲಿ ಉಳಿದುಕೊಂಡ. ಆ ಹೊಟೆಲ್ಲಿನ ಅವ್ಯವಸ್ಥೆಯೇ ವ್ಯವಸ್ಥೆಯಾಗಿತ್ತು. ಸೊಳ್ಳೆಯ ಕಾಟದಲ್ಲಿ ಮಲಗಲು ಸಿಗದ ಮಂಚ, ಹೊದೆಯಲೂ ಸಹ ಸಿಗಲಿಲ್ಲವಾಗಿತ್ತು ಒಂದು ಚಾದರ. ಹೀಗಿದ್ದರೂ ಹಾಗೋ ಹೀಗೋ ಬೆಳಗು ಮಾಡಿದ. ಅವರ ಮಾತಿನಂತೆ ಮಾಡಿದ ಅವನು ತನ್ನ ಕಂಪನಿಯನ್ನು ತಲುಪಿ ಅಧಿಕಾರ ಹಸ್ತಾಂತರ ಪಡೆದುದ್ದು ಮರೆಯಲಾಗದ ಹುಟ್ದಬ್ಬದ ಉಡುಗೊರೆ.