Friday, January 17, 2014

ಗೀಚಿದ ಪದಗಳು

ಗೀಚಿದ ಪದಗಳು
ಸತ್ಯವಾಗೊದಿಲ್ಲ
ಮೋಹದ ಅಲೆಗಳು
ಮನ ಸೇರೋದಿಲ್ಲ

Wednesday, January 1, 2014

|| ಚಪಲರು ||

ಚಕ್ರವಿರದ ಗಾಡಿಯಲ್ಲಿ
ಎಗರಿ ಕುಳಿತ ಹಂಸೆ ನಾನು
ಎಲ್ಲಿಗಂತ ಕೇಳದೇನೆ
ವಾಹನವೆತ್ತು ನಡೆದ ಹೈದರು
ನಾ ಏನು ಅಂತ ಹೇಳಲಿ
ಇದುವೆ ನನ್ನ ಜಾತಕ...

ಹಳೇ ಸೀರೆಯುಟ್ಟ ಮನೆ ಹೆಂಡ್ತಿಯ
ಮರೆತು ಬಂದ ಮಳ್ಳರು
ನಾ ತೂಕದಲ್ಲಿ ಕಡಿಮೆ ಎಂದು
ಎತ್ತು ಮೆರೆವ ತುಂಟರು
ಸಂಸಾರ ಸಾಗರದ ಜಂಜಾಟಕೆ
ನೀರುಬಿಟ್ಟ ಜೊಲ್ಲುಸುರುಕರು...

ಉಪಗ್ರಹವನು ಹೊಕ್ಕಿ ನಿಂತು
ಚಂದ್ರಲೋಕಕ್ಕೆ ಹಾರಿ ಹೋದರು
ಹಿಂದೆ ಬರುವ ಅಸ್ಸಾಮಿಗಳು
ನನ್ನ ನೋಡುತ ಕೀಟ್ಲೆ ಮಾಡುತ
ಸುಖಿಸಲು ಹಿಂದೆಬಿದ್ದಿರುವ
ಮೋಹಿಸುವಾಸೆಯ ಚಪಲರು...