ಒಂಟಿಯಾದ ಬಾಳಲಿ ಒಬ್ಬಂಟಿಯಾದ ಸಮಯದಿ
ಮನಸಿನ ಮಿಡಿತಗಳು
ಕಲ್ಪನೆ ಕನಸಿನ ಕೂಸಾಯ್ತು
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ……..||
ಮೊಹಗಾರ ನಾನು ಅಲ್ಲ
ನಿನ್ನ ಅಂದ ಚೆಂದಕ್ಕೆಂದು
ಸಾಲಗಾರನಾದೆ ಇಂದು
ನಿನ್ನ ಒಲವ ಬಯಸಿ ಬಂದು
ಕಾಣದಾಗ ಕನ್ಮಣಿಯನು
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ…….||
ಅನಿಸುತಿಲ್ಲಾ ಚಂದ್ರನಿಂದು
ನಿನಗಿಂತಲು ಚೆಂದವೆಂದು
ಕುರುಡನಾಗಿ ಹೋಗಬೇಕು
ನಿನ್ನ ಕಂಡಮೇಲೆ ನಾನು
ನೋಡುವಾಸೆ ಮೀರಿದಾಗ
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ………||
ರವಿ ಕಾಣದೂರಿನಿಂದಾಚೆಗೆ ನಿನ್ನ ಹೋತ್ತೊಯ್ಯುವೆ
ಅಲ್ಲಿ ಪ್ರೇಮಗುಡಿಯೊಂದ ನಾನು ಕಟ್ಟಿಕೊಡುವೆ
ಪ್ರೇಮದೇವಿಯಾಗಿ ನಿನ್ನ ಪೂಜೆ ಮಾಡುವೆ
ಪ್ರೇಮ ನಿವೇದಿಸಲೆಂದು ಬಂದು ಪೂಜಾರಿಯಾಗುವೆ
ಮಂತ್ರವೆಂದು ಪ್ರೇಮಗೀತೆ ಹೇಳುವಾಗ
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ…….||
ಜಡೆಯ ಹಾಕಿ ಮುಡಿಗೆ ಮಲ್ಲಿಗೆ ಹೂವು ಮುಡಿಸಲೆ
ಹಣೆಗೆ ಬೊಟ್ಟು ಇಟ್ಟು ನಿನಗೆ ದೃಷ್ಟೀ ತೆಗೆಯುವೆ
ಪೂರ್ಣ ಶಶಿಯ ತೋರಿಸುತ್ತ ಹರಟೆ ಹೊಡೆಯಲೆ
ಪ್ರತಿ ಜನ್ಮದಲ್ಲೂ ನಿನ್ನ ಪ್ರೇಮದಾಸನಾಗಿ ಉಳಿಯುವೆ
ತುಡಿತದಿಂದ ಮನದ ಕಂಪನ ಜಾಸ್ತಿಯಾಯ್ತು
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ……..||
:-ಗುರಿ ಮುಟ್ಟುವ ತನಕ,
ವಿನಾಯಕ ಭಾಗ್ವತ